ಇಂದು 22-08-2019 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 10ನೇ ತರಗತಿಗೆ ಅತಿ ಹೆಚ್ಚು ಮಕ್ಕಳು ದಾಖಲಾಗಿರುವ ಸರ್ಕಾರಿ ಪದವಿ-ಪೂರ್ವ  ಕಾಲೇಜುಗಳಾದ ಸಪಪೂಕಾ ದೇವನಹಳ್ಳಿ, ವಿಜಯಪುರ, ದೊಡ್ಡಬಳ್ಳಾಪುರ,ಸಪಪೂಕಾ ದೇವಲಾಪುರ ಮತ್ತು ಸಪಪೂಕಾ ನೆಲಮಂಗಲ ಈ ಶಾಲೆಗಳ ಉಪ ಪ್ರಾಂಶುಪಾಲರು ಹಾಗೂ ಸಹ ಶಿಕ್ಷಕರ ಚಿಂತನ-  ಮಂಥನ ಸಭೆಯನ್ನು ಜಿಲ್ಲಾ ಡಯಟ್ ನಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಗ್ರಾಮಾಂತರ  ಜಿಲ್ಲಾ ಪಂಚಾಯಿತ್ ನ  ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ R.ಲತಾ ರವರು ಮಾತನ್ನಾಡಿ 2020 ನೇ ಏಪ್ರಿಲ್ SSLC ಫಲಿತಾಂಶದಲ್ಲಿ ಈ 5 ಪದವಿ-ಪೂರ್ವ  ಕಾಲೇಜುಗಳಲ್ಲಿ ಬರುವ ಫಲಿತಾಂಶವೇ ನಮ್ಮಜಿಲ್ಲೆಯ ಉತ್ತಮ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸುವವು. ಆದ್ದರಿಂದ ಆರಂಭದಿಂದಲೇ SSLC ಮಕ್ಕಳ ಗುಣಾತ್ಮಕ ಕಲಿಕೆಯ ಕಡೆ ಉತ್ಸಾಹದಿಂದ ಮುನ್ನೆಡೆಸುವ ಬಗ್ಗೆ ಗಮನ ನೀಡುವಂತೆ ಶಿಕ್ಷಕರಿಗೆ ಕಿವಿಮಾತು ಹೇಳಿದರು. ತಜ್ಞರಾದ ಡಾ. ನಾಗರಾಜ್ ರವರು ಫಲಿತಾಂಶ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ  ಬಗ್ಗೆ ಶಿಕ್ಷಕರ ಮೂಲಕವೇ  ಮಾಹಿತಿಯನ್ನು ಪಡೆದುಕೊಂಡರು. ಉಪ ನಿರ್ದೇಶಕರಾದ ಶ್ರೀ ಕೃಷ್ಣಮೂರ್ತಿ, ಡಯಟ್ ನ ಪ್ರಾಂಶುಪಾಲರಾದ  ಉಮೇಶ್ ಶಿರಹಟ್ಟಿಮಠ್ , ಶಿಕ್ಷಣಾಧಿಕಾರಿ ಹನುಮಂತಪ್ಪ, ಉಪ ಪ್ರಾಂಶುಪಾಲರು ಡಯಟ್ ನ ಹಿರಿಯ/ಉಪನ್ಯಾಸಕರು, ವಿಷಯ ಪರಿವೀಕ್ಷಕರು ಮತ್ತು ಈ ಪ್ರೌಢಶಾಲೆಗಳ ಸಹ ಶಿಕ್ಷಕರು ಸಭೆಯಲ್ಲಿ ಭಾಗವಹಿದ್ದರು. ಪ್ರಸ್ತುತ ವರ್ಷ ಸರ್ವ ಶ್ರೇಷ್ಠ ಫಲಿತಾಂಶ ತರುವ ಬಗ್ಗೆ ಸಂಕಲ್ಪ ಕೈಗೊಳ್ಳಲಾಯಿತು.